ಸಿಂಹ ಮತ್ತು ಜಾಣ ಮೊಲ | Lion and Rabbit | Panchatantra Stories

ಒಂದು ಕಾಡಿನಲ್ಲಿ ಒಂದು ಸಿಂಹ ಇತ್ತು. ಅದು ತುಂಬಾ ಬಲಿಷ್ಠವಾಗಿತ್ತು. ಅದು ದಿನವೂ ಪ್ರಾಣಿಗಳನ್ನು ತಿಂದು ಹಾಕುತ್ತಿತ್ತು. ಅದರ ಭಯದಿಂದ ಎಲ್ಲ ಪ್ರಾಣಿಗಳು ನಡುಗುತ್ತಿದ್ದವು. ಪ್ರಾಣಿಗಳೆಲ್ಲ ಸಭೆ ಸೇರಿ ಒಂದು ನಿರ್ಧಾರ ಮಾಡಿ, "ನೀನು ನಿನಗೆ ಇಷ್ಟ ಬಂದ ಪ್ರಾಣಿಗಳನ್ನು ತಿಂದು ಎಲ್ಲರನ್ನೂ ಭಯಗೊಳಿಸಬೇಡ. ನಾವು ದಿನ ಒಬ್ಬೊಬ್ಬರಾಗಿ ನಿನಗೆ ಸರದಿಯಾಗಿ ಬಂದು ನಿನಗೆ ಆಹಾರವಾಗುತ್ತೇವೆ" ಎಂದು ಹೇಳಿದವು.


storieskannada1


     ಪ್ರಾಣಿಗಳ ಮಾತಿನಂತೆ ಕಾಡಿನ ರಾಜ ಸಿಂಹ ಒಪ್ಪಿಗೆ ನೀಡಿದ. ಹೀಗೆ ಒಂಫು ದಿನ ಮೊಲದ ಸರದಿ ಬಂದಿತು. ಅದು ತಾನು ಉಳಿದುಕೊಳ್ಳಲು ಒಂದು ಉಪಾಯವನ್ನು ಹುಡುಕಿತು. ಸಿಂಹ ಮೊಲಕ್ಕಾಗಿ ಕಾಯುತ್ತಾ ಕುಳಿತಿತ್ತು ಮೊಲ ತುಂಬಾ ಹೊತ್ತು ಕಾಯಿಸಿ ನಂತರ ಬಂದಿತು. ಸಿಂಹಕ್ಕೆ ಕೋಪ ಬಂದಿತು. ಅದು ಮೊಲವನ್ನು ನೋಡಿ ಘರ್ಜಿಸಿತು. "ರಾಜ, ನಾನು ದಾರಿಯಲ್ಲಿ ಬರುವಾಗ ಮತ್ತೊಂದು ಸಿಂಹವನ್ನು ಕಂಡೆನು. ಅದು ನನ್ನನ್ನು ಕೊಲ್ಲಲು ಬಂದಿತು. ನಾನು ತಪ್ಪಿಸಿಕೊಂಡು ನಿನ್ನ ಬಳಿಗೆ ಬಂದೆನು" ಎಂದು ಹೇಳಿತು.

     ಮೊಲದ ಮಾತುಗಳನ್ನು ಕೇಳಿದ ಸಿಂಹರಾಜ, "ನನ್ನ ರಾಜ್ಯದಲ್ಲಿ ಇನ್ನೊಂದು ಸಿಂಹವೇ? ನಾನು ಇರುವಾಗ ಮತ್ತೊಬ್ಬ ಇರಬಾರದು ನಡೆ ನನಗೆ ತೋರಿಸು" ಎಂದು ಹೇಳಿತು. ಮೊಲವು ಸಿಂಹವನ್ನು ಕರೆದುಕೊಂಡು ಒಂದು ಬಾವಿಯ ಹತ್ತಿರ ಹೋಯಿತು. "ನೋಡು ರಾಜ ನಿನ್ನ ಶತ್ರು ಬಾವಿಯ ಒಳಗಡೆ ಇದ್ದಾನೆ". ಸಿಂಹ ಬಾವಿಯೊಳಗೆ ಬಗ್ಗಿ ನೋಡಿತು. ಅದರ ಪ್ರತಿಬಿಂಬವನ್ನು ನೀರಿನಲ್ಲಿ ನೋಡಿತು. ಅದು ತುಂಬಾ ಮೂರ್ಖ ಸಿಂಹ ಅದು ಘರ್ಜಿಸಿತು. ಬಾವಿಯಲ್ಲಿ ಅದರ ಪ್ರತಿಬಿಂಬವು ಘರ್ಜಿಸಿತು. ಅದನ್ನು ನೋಡಿ, "ನೀನು ನನಗೆ ನೋಡಿ ಘರ್ಜಿಸುವೆಯಾ?" ಎಂದು ಬಾವಿಯಲ್ಲಿ ಹಾರಿತು. ಅಲ್ಲಿಯೇ ಸತ್ತು ಹೋಯಿತು.

ನೀತಿ: ಶಕ್ತಿಯಿಂದ ಸಾಧಿಸಲಾಗದ್ದನ್ನು ಯುಕ್ತಿಯಿಂದ ಸಾಧಿಸಬೇಕು

ಇದೇ ರೀತಿಯ ಇನ್ನಷ್ಟು ಕಥೆಗಳನ್ನು ಓದಲು, ಅಪ್ಡೇಟ್ಸ್ ಪಡೆಯಲು, ನಮ್ಮನ್ನು Instagramನಲ್ಲಿ ಫಾಲೋ ಮಾಡಿ.

Post a Comment

0 Comments