ದಶರಥನ ವೃತ್ತಾಂತ | Tale of Dasharatha | Ramayana Stories

ಹಿಂದೆ ಉತ್ತರ ಭಾರತದಲ್ಲಿ ಕೋಸಲಾ ಎಂಬ ಹೆಸರಿನ ರಾಜ್ಯ ಇತ್ತು. ಆ ರಾಜ್ಯದ ರಾಜಧಾನಿ ಅಯೋಧ್ಯೆ. ಕೋಸಲ ರಾಜ್ಯವನ್ನು ದಶರಥ ಎಂಬ ಹೆಸರಿನ ರಾಜನು ಆಳುತ್ತಿದ್ದನು. ರಾಜನ ಅತ್ಯಂತ ಶೂರ, ಪರಾಕ್ರಮಿ, ಕರುಣಾಳು ಎಂಬ ಹೆಸರನ್ನು ಗಳಿಸಿದ್ದನು. ಅವನು ತನ್ನ ಪ್ರಜೆಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ದಶರಥ ರಾಜನ ಪತ್ನಿ ಕೌಸಲ್ಯ. ರಾಜನಿಗೆ ಬೇರೆ ರಾಜ್ಯಗಳ ರಾಜರು ಪ್ರೀತಿಪಾತ್ರ ಸ್ನೇಹಿತರಾಗಿದ್ದರು. ಕೋಸಲ ರಾಜ್ಯವು ಸಕಲ ಸುಖ, ಸೌಭಾಗ್ಯಗಳಿಂದ ತುಂಬಿತ್ತು. ಆದರೆ ರಾಜನಿಗೆ ಸಂತಾನ ಭಾಗ್ಯ ಇಲ್ಲದೇ ಇರುವುದೇ ಒಂದು ಕೊರಗು. ರಾಜನ ಪುನಃ ವಿವಾಹವಾದನು. ಆ ರಾಣಿಯ ಹೆಸರು ಸುಮಿತ್ರೆ. ಆಕೆಗೂ ಮಕ್ಕಳಾಗಲಿಲ್ಲ. ದಶರಥನು ಸಂತಾನ ಭಾಗ್ಯಕ್ಕಾಗಿ ಮತ್ತೊಂದು ವಿವಾಹವಾದನು. ಆ ರಾಣಿಯ ಕೈಕೇಯಿ. ದಶರಥನಿಗೆ ಮೂರು ವಿವಾಹವಾದರು ಸಂತಾನ ಭಾಗ್ಯ ಮಾತ್ರ ದೊರಕಲಿಲ್ಲ.


storieskannada1


     ದಶರಥನ ರಾಜ್ಯದಲ್ಲಿ ಸಕಲ ಐಶ್ವರ್ಯ ಇದ್ದರೂ ಪುತ್ರ ಸಂತತಿ ಇಲ್ಲದೆ ಅವನ ಮನಸ್ಸು ಅಮಾವಾಸ್ಯೆಯ ಚಂದ್ರನಂತಾಗಿತ್ತು. ರಾಜನ ಚಿಂತೆಯಲ್ಲಿ ಮುಳುಗಿದನು. ತನ್ನ ನಂತರ ತನ್ನ ರಾಜ್ಯವನ್ನು ನಡೆಸಿಕೊಂಡು ಹೋಗುವ ವಾರಸುದಾರರಿಲ್ಲವೇ? ಎಂಬ ಚಿಂತೆಯೂ ರಾಜನನ್ನು ಬಹುವಾಗಿ ಕಾಡುತ್ತಿತ್ತು. ದಶರಥನು ಬ್ರಾಹ್ಮಣರನ್ನು, ವಿದ್ಯಾವಂತರನ್ನು, ಮೇಧಾವಿಗಳನ್ನು ಅಪಾರವಾಗಿ ಗೌರವಿಸುತ್ತಿದ್ದನು. ಅವನ ಆಸ್ಥಾನದಲ್ಲಿ ಹಲವಾರು ವಿದ್ವಾಂಸರು ನೆಲೆಯಾಗಿದ್ದರು. ಹೀಗೆ ದಶರಥನ ಎಲ್ಲ ರೀತಿಯ ಸೇವಾಕಾರ್ಯಗಳನ್ನು ಮಾಡುತ್ತಾ ಪ್ರಜೆಗಳ ಮನ್ನಣೆ ಹೊಂದಿದ್ದನು.

     ರಾಜನ ಕುಲಗುರುಗಳು ವಸಿಷ್ಠ. ಒಂದು ದಿನ ರಾಜನು ಚಿಂತೆಯಲ್ಲಿರುವಾಗ ವಸಿಷ್ಠ ಮಹರ್ಷಿ ಅರಮನೆಗೆ ಆಗಮಿಸಿದರು. ರಾಜನ ಚಿಂತೆಗೆ ವ್ಯಾಕುಲತೆಗೆ ಕಾರಣವೇನೆಂದು ಪ್ರಶ್ನಿಸಿದರು. ಆಗ ರಾಜನು ತನ್ನ ಮನದ ಚಿಂತೆಯನ್ನು ಹೇಳಿಕೊಂಡನು.

     "ಗುರುಗಳೇ ! ನನಗೆ ಸಂತಾನ ಭಾಗ್ಯ ಇಲ್ಲ ಮಕ್ಕಳಿಲ್ಲದವರಿಗೆ ಜಗತ್ತಿನಲ್ಲಿ ಮೋಕ್ಷ ಸಿಗದು. ಹೀಗಾಗಿ ನನಗೆ ರಾಜ್ಯ, ಕೋಶ ಏನಿದ್ದರೂ ವ್ಯರ್ಥ. ನನಗೆ ಮಕ್ಕಳಿಲ್ಲ ಎಂಬ ಕೊರಗು ಅತಿಯಾಗಿ ಬಾಧಿಸುತ್ತಿದೆ". ರಾಜನ ದುಃಖವನ್ನು ಅರ್ಥ ಮಾಡಿಕೊಂಡು ವಸಿಷ್ಠರು ಒಂದು ಸಲಹೆಯನ್ನು ನೀಡಿದರು.

     "ರಾಜಾ ! ನೀನು ಋಷ್ಯಶೃಂಗ ಋಷಿಯ ಮೊರೆ ಹೋಗು. ನಿನಗೆ ಸಂತಾನ ಭಾಗ್ಯ ಲಭಿಸುವುದು. ಅವರ ಸಾರಥ್ಯದಲ್ಲೇ ಪುತ್ರಕಾಮೇಷ್ಟಿಯಾಗವನ್ನು ಮಾಡಿಸು. ಆಗ ನಿನ್ನಗೆ ಮಕ್ಕಳಾಗುವರು".

     ಕುಲಪುರೋಹಿತರ ಮಾತುಗಳನ್ನು ಕೇಳಿ ರಾಜನಿಗೆ ಮಹಾದಾನಂದವಾಯಿತು. ಕೂಡಲೇ ಅರಮನೆಗೆ ಬಂದ ಮಹಾರಾಜನು ತನ್ನ ಮೂವರು ರಾಣಿಯರ ಜೊತೆ ಸಮಾಲೋಚನೆ ನಡೆಸಿದ ನಂತರ ಎಲ್ಲರೂ ಸೇರಿ ಮುನಿ ಋಷ್ಯಶೃಂಗರ ಆಶ್ರಮಕ್ಕೆ ಬಂದರು. ರಾಜನು ಮುನಿಗಳ ಪಾದಗಳ ಮೇಲೆ ಎರಗಿ ತನ್ನ ಮನದ ಅಭೀಷ್ಟೆಯನ್ನು ನೆರವೇರಿಸಿಕೊಡುವಂತೆ ಬೇಡಿಕೊಂಡನು. ರಾಜನ ಜತೆ ರಾಣಿಯರು ಋಷಿಗಳ ಪಾದಗಳಿಗೆ ನಮಿಸಿದರು. ರಾಜಧಾನಿಯಿಂದ ತಂದಿದ್ದ ಬೆಲೆಬಾಳುವ ಕಾಣಿಕೆಗಳನ್ನು ಋಷಿಗಳಿಗೆ ಕಾಣಿಕೆಯಾಗಿ ನೀಡಿದರು. ಮುನಿಯು ರಾಜನ ಆಧಾರ ಅತಿಥ್ಯದಿಂದ ತೃಪ್ತನಾದನು. ಬಂದ ಕಾರಣವನ್ನು ಕೇಳಿದಾನು. ದಶರಥನು ತನ್ನ ಮನದ ಅಭೀಷ್ಠೆಯನ್ನು ಋಷಿಯ ಬಳಿ ತೋಡಿಕೊಂಡನು. ತನಗೆ ಸಂತಾನ ಭಾಗ್ಯ ದೊರಕಲು ಮಾಡುವ ಯಜ್ಞದ ಬಗ್ಗೆ ತಿಳಿಸಿದನು.

     "ಋಷಿವರ್ಯರೇ ! ತಾವು ನಿಮ್ಮ ಅಧ್ವರ್ಯದಲ್ಲಿ ನನ್ನ ಕೈಯಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಬೇಕು. ಸಂತಾನ ಭಾಗ್ಯ ಲಭಿಸುವಂತೆ ಮಾಡಿ'. ರಾಜನ ಮಾತುಗಳನ್ನು ಕೇಳಿ ಋಷಿಯು ತನ್ನ ಸಮ್ಮತಿಯನ್ನು ಸೂಚಿಸಿದನು.

     ರಾಜನ ಸಂತೋಷ ಹಾಗೂ ಸಂಭ್ರಮದಿಂದ ಯಾಗದ ಸಿದ್ಧತೆಗಳನ್ನು ಮಾಡತೊಡಗಿದ್ದಾನೆ. ಇಡೀ ಅರಮನೆಯ ಅಧಿಕಾರಿಗಳು ಯಾಗದ ಸಿದ್ಧತೆಗಳನ್ನು ಭರದಿಂದ ಮಾಡತೊಡಗಿದರು. ಹೀಗೆ ದಶರಥ ಮಹಾರಾಜನು ತನಗೆ ಸಂತಾನ ಪ್ರಾಪ್ತಿ ದೊರಕಿಸಿಕೊಳ್ಳುವ ಸಲುವಾಗಿ ಪುತ್ರಕಾಮೇಷ್ಟಿ ಯಾಗವನ್ನು ಮಾಡಲು ಬಹಳ ಉತ್ಸಾಹದಿಂದ ಕಾಯುತ್ತಿದ್ದನು. ಅವನ ಮೂವರು ರಾಣಿಯರಿಗೂ ಸಂಭ್ರಮ. ಇಡೀ ಅರಮನೆ ಮಕ್ಕಳಿಲ್ಲದೇ ಬಿಕೋ ಎನ್ನುತ್ತಿತ್ತು. ಹೀಗಾಗಿ ಅರಮನೆಗೆ ಕಳೆ ಬರಬೇಕೆಂದರೆ ಪುಟ್ಟ ಮಕ್ಕಳ ಕಲರವ ಬರಬೇಕು. ರಾಜನ ರಾಜ ಪುರೋಹಿತರು ಸುತ್ತಮುತ್ತಲಿನ ಆಶ್ರಮಗಳಲ್ಲಿ ನೆಲೆಸಿರುವ ಋುಷಿ, ಮುನಿಗಳಿಗೆ ಯಾಗಕ್ಕೆ ಬರಬೇಕೆಂದು ಆಹ್ವಾನ ಕಳಿಸಿದರು.

     ದಶರಥನು ಶುಚಿಭೂರ್ತನಾಗಿ ತನ್ನ ಮೂವರು ಪತ್ನಿಯರ ಜೊತೆ ಯಾಗ ಕುಂಡದ ಬಳಿ ಆಸೀನನಾದನು. ಯಗ್ನದ ಹವಿಸ್ಸನ್ನು ಸ್ವೀಕರಿಸಲು ಯಕ್ಷ, ಗಂಧರ್ವರು, ದೇವಾನುದೇವತೆಗಳು ಕಾತುರದಿಂದ ಕಾಯುತ್ತಿದ್ದರು. ರಾವಣಾಸುರ ಎಂಬ ದುರುಳ ದೈತ್ಯ ರಾಜನ ಕಂಬಧ ಹಸ್ತಗಳಿಂದ ತಮ್ಮನ್ನು ಬಿಡುಗಡೆ ಮಾಡಲು, ಅವನ ಕಾಟದಿಂದ ಮುಕ್ತಿಗೊಳಿಸಲು ಒಬ್ಬ ಅವತಾರ ಪುರುಷ ಜನಿಸಿ ಬರುವನೆಂದು ಮೂರು ಲೋಕದಲ್ಲಿ ನೆಲೆಸಿರುವ ಗಂಧರ್ವ, ಯಕ್ಷ, ಕಿನ್ನರ, ಕಿಂಪುರುಷರು ಕಾಯುತ್ತಿದ್ದರು. ವಿಷ್ಣು ಪರಮಾತ್ಮ, ನಾರಾಯಣನೇ ಶ್ರೀರಾಮನಾಗಿ ದಶರಥನ ಮಗನಾಗಿ ಜನಿಸಿ ಬಂದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೀರಿಸುವನೆಂಬ ಸಂಭ್ರಮ!

ಇದೇ ರೀತಿಯ ಇನ್ನಷ್ಟು ಕಥೆಗಳನ್ನು ಓದಲು, ಅಪ್ಡೇಟ್ಸ್ ಪಡೆಯಲು, ನಮ್ಮನ್ನು Instagramನಲ್ಲಿ ಫಾಲೋ ಮಾಡಿ.

Post a Comment

0 Comments