Preface

ವಿಕ್ರಮಾದಿತ್ಯನ ಕಥೆಗಳು


ಜಗತ್ತಿನಲ್ಲಿ ಮಾಯ ಮಂತ್ರ, ಕ್ಷುದ್ರದೇವತೆಗಳು, ಮಂತ್ರ ಜಾಲ, ಬೇತಾಳ, ದೆವ್ವ, ಪೀಡೆಗಳು ಇವೆ ಅಥವಾ ಇಲ್ಲ ಎಂಬ ಮಾತುಗಳನ್ನು ಪಕ್ಕಕ್ಕೆ ಇಟ್ಟು ವಿಕ್ರಮ ಮತ್ತು ಬೇತಾಳನ ಕಥೆಗಳನ್ನು ಅವಲೋಕಿಸಿದಾಗ ನಮಗೆ ಮನದಟ್ಟಾಗುವ ಸಂಗತಿ ಯಾವುದೆಂದರೆ ವಿಕ್ರಮ ಬೇತಾಳ ಕತೆಗಳು ಮಕ್ಕಳಿಗೆ ಮನರಂಜನೆ, ನೀತಿ, ನಿಸ್ವಾರ್ಥ, ಧೈರ್ಯ, ಶೌರ್ಯ ,ಪರಾಕ್ರಮವನ್ನು ಬೋಧಿಸುತ್ತವೆ ಎಂಬುದು ನಿಸ್ಸಂಶಯವಾದ ಮಾತು.


Vikramaditya Stories


     ಹಾಗೆಯೇ ಪುಟ್ಟ ಮಕ್ಕಳಿಗೆ ಅಂದರೆ 2 ವರ್ಷ ವಯಸ್ಸಿನಿಂದ 5 ವರ್ಷದ ಮಕ್ಕಳು ಅಬೋಧ, ಅಮಾಯಕತೆಯಿಂದ ಕೂಡಿರುತ್ತವೆ. ಅಂಥಹ ಮಕ್ಕಳ ಕಣ್ಣಿಗೆ  ಬೇತಾಳನ ಕಥೆಗಳು ದಂತಕಥೆಗಳಾಗಿ ಮನದಲ್ಲಿ ಮೂಡುತ್ತವೆ. ಮಕ್ಕಳ ಮನಸೂರೆಗೊಳ್ಳುವ ಇಂಥಹ ಕಥೆಗಳು ಬಾಲ್ಯಕ್ಕೆ ತುಂಬಾ ಅವಶ್ಯ. ಅಂತಹ ಕಥೆಗಳನ್ನು ಕೇಳಿಸಿಕೊಂಡ ಬಂದ ಬಾಲಕರು, ಬಾಲಕಿಯರು ಜಗತ್ತಿನ ಅತ್ಯಂತ ಎತ್ತರದ ಸ್ಥಾನಗಳಲ್ಲಿ ಇದ್ದಾರೆ. ಜೀವನದ ಸರಪಳಿಯಲ್ಲಿ ಬಾಲ್ಯದ ಕೊಂಡಿ ಬಹಳ ಮುಖ್ಯ. ಆರಂಭದ ಕೊಂಡಿ ಭದ್ರವಾಗಿದ್ದರೆ ಸರಪಳಿಯು ಗಟ್ಟಿಯಾಗಿರುವುದು. ಹೀಗೆ ಮಕ್ಕಳ ಮಾನಸಿಕ ವಿಕಾಸದಲ್ಲಿ ಕಥೆಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಈ ಮಾತುಗಳು ಜಗತ್ತಿನ ಎಲ್ಲಾ ಮಕ್ಕಳ ಮನಸೂರೆಗೊಳ್ಳಲು ಅತ್ಯಂತ ವಿನಮ್ರವಾಗಿ ಹೇಳಬಹುದು. ವಿಕ್ರಮ ರಾಜನು ಮಕ್ಕಳ ಮನದಲ್ಲಿ ನಾಯಕನಾಗಿ ರೂಪುಗೊಂಡ ಬದುಕಿನ ಎಲ್ಲ ಪ್ರಶ್ನೆಗಳನ್ನು ಸುಲಭವಾಗಿ ಬಿಡಿಸುವಂತೆ ಆಗಲಿ. ಆಗ ರಾಜ ವಿಕ್ರಮನಿಗೂ ಸಂತೋಷವಾಗುವುದು.


VIKRAMADITHYA STORIES

Post a Comment

0 Comments