Preface
ಮಕ್ಕಳ ರಾಮಾಯಣ
ಸಾವಿರಾರು ವರ್ಷಗಳ ಹಿಂದೆ ನಡೆದ ರಾಮಾಯಣದ ಕಥೆ ಇಂದಿಗೂ ನಿತ್ಯನೂತನ. ಭಾರತೀಯರ ಧಾರ್ಮಿಕ ಗ್ರಂಥವಾಗಿ ರಾಮಾಯಣವನ್ನು ಪರಿಗಣಿಸಲಾಗಿದೆ. ರಾಮಾಯಣದ ಪಾತ್ರಗಳನ್ನು ಭಾರತೀಯರು ತಮಗೆ ತಾವೇ ಒಲಿಸಿಕೊಂಡೇ ಸಂತೋಷ, ಹೆಮ್ಮೆ ಪಡುವುದುಂಟು. ಹಾಗೆಯೇ ಭಾರತೀಯ ಪುರುಷನನ್ನು "ಶ್ರೀರಾಮ"ನಿಗೆ ಹೊಲಿಸುವುದು ವಾಡಿಕೆ. ಹಾಗೆಯೇ ಹೆಣ್ಣಿನ ಸಹನೆಯನ್ನು "ಸೀತೆ"ಗೆ ಹೊಲಿಸುವುದು. ಬಾಲ್ಯದಲ್ಲಿ ಶ್ರೀರಾಮ ಮತ್ತು ಅವನ ಸಹೋದರರು ವೀರತ್ವ, ಪರಾಕ್ರಮದಿಂದ ನಡೆದುಕೊಂಡ ಘಟನೆಗಳು ಹಲವಾರು. ಎಂದೆಂದಿಗೂ ರಾಮಾಯಣದ ಪಾತ್ರಗಳು ನನ್ನ ಮನಃಪಟಲದಲ್ಲಿ ಅಚ್ಚಳಿಯದೆ ಉಳಿದಿರುತ್ತವೆ.
storieskannada1 |
ಆಧುನಿಕ ಕಾಲದ ಮಕ್ಕಳಿಗೆ ಪುಸ್ತಕದ ರಾಮಾಯಣಕ್ಕಿಂತ ಟಿವಿ ರಾಮಾಯಣದ ಬಗ್ಗೆ ಹೆಚ್ಚು ಗೊತ್ತಿರುತ್ತದೆ. ಆದರೆ ಓದುವುದು ಎಂದಿಗೂ ಮನದಿಂದ ದೂರವಾಗದು. ಕಣ್ಣು ನೋಡಿದ ಚಿತ್ರಗಳನ್ನು ಬಹಳಕಾಲ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಆದರೆ ಓದಿದ ಪ್ರತಿಯೊಂದು ಪಾತ್ರವನ್ನು, ಓದುತ್ತಾ ಮಾಡಿಕೊಂಡ ಕಲ್ಪನೆಗೆ ಹಲವಾರು ವರ್ಷಗಳ ಆಯುಷ್ಯ ಇರುವುದು. ಹೀಗಾಗಿ ಪುಸ್ತಕ ಮಾಧ್ಯಮ ಜನರ ಪ್ರೀತಿಗೆ ಪಾತ್ರವಾಗಿದೆ. ಪುಟ್ಟ ಬಾಲಕರಾದ ಶ್ರೀರಾಮ ಮತ್ತು ಅವನ ಸಹೋದರರ ಆಟ, ಪಾಠಗಳು, ಪರಾಕ್ರಮ, ಶೌರ್ಯಗಳ ಬಗ್ಗೆ "ಮಕ್ಕಳ ರಾಮಾಯಣ" ಎತ್ತಿ ನಿಂತಿದೆ.
Post a Comment
0 Comments